ಯಾರನು ನಂಬಲಿ ಹೇಗೆಂದು ನಂಬಲಿ -Yarannu Nambali
135
Kannada songs
Shop Now: Bible, songs & etc
Kannada Lyrics
ಯಾರನು ನಂಬಲಿ ಹೇಗೆಂದು ನಂಬಲಿ
ಮುರಿದ ಬಾಳಲಿ ಯಾರ ಮೊರೆ ಹೋಗಲಿ
ನೀನೇ ಇಲ್ಲದಿದ್ದರೆ ನಾನೇನಾಗಿರುವೆನೋ ದೇವಾ
ನಮಗಾಗಿ ಇರುವ ಇಮ್ಮಾನುವೇಲನಾಗಿ
ಜೊತೆಯಾಗಿ ಬರುವ ಯೆಹೋವಾ ಶಮ್ಮ
ಆಶೆಯು ಬತ್ತಿಹೋಗಿ ನಿರಾಶೆಯ ಬದುಕಲ್ಲಿ
ಆತ್ಮೀಯತೆ ಇಲ್ಲದೆ ಕುಗ್ಗಿಹೋದವರಿಗೆ
ಇರುವುದಾ ಆಶೆಯು ತೀರುವ ಮಾರ್ಗವು
ಇರುವುದಾ ಆತ್ಮೀಯತೆಯ ನಿಲಯವು ||ನೀನೇ ಇಲ್ಲದಿದ್ದರೆ ||
ತಾಯಿ ಪ್ರೀತಿ ಇಲ್ಲದೆ ತಂದೆಗೆ ದೂರವಾಗಿ
ಮಕ್ಕಳಿಗೆ ಭಾರವಾಗಿ ಜೀವಿಸುವಂತವರಿಗೆ
ಇರುವುದಾ ಅನಾಥರಿಗೆ ಸಹಾಯವು
ಇರುವುದಾ ದೌರ್ಭಾಗ್ಯರಿಗಾಶ್ರಯವು ||ನೀನೇ ಇಲ್ಲದಿದ್ದರೆ ||
ನಿನ್ನನ್ನೆ ನಂಬುವೆ ನಿನ್ನಲ್ಲೆ ಬಾಳುವೆ
ಮುರಿದಾ ಬಾಳಲಿ ನಿನ್ನ ಮೊರೆ ಹೊಕ್ಕುವೆ ||ನೀನೆೇ ಇಲ್ಲದಿದ್ದರೆ | |