Ninnannu Kaanalu – ನಿನ್ನನ್ನು ಕಾಣಲು
ನಿನ್ನನ್ನು ಕಾಣಲು ಎಷ್ಟೋ ಆಸೆಯೇ
ನಿನ್ ಸ್ವರವ ಕೇಳಲು ಕಾದು ಇರುವೆ
ನಿನ್ ಮಾರ್ಗ ತೋರಯ್ಯಾ ಶೂನ್ಯದ ಜೀವದಿ
ನಿನ್ ಬಳಿಗೆ ಬರುತಿರುವೆ ಮನದ ಭಾರದಿ
ನನ್ನ ಕೃಪೆಯೇ ನಿನಗೆ ಸಾಕು ಅಂದವನು ನೀನಲ್ಲವೇ
ಪ್ರೀತಿಮಾಡಿ ಪ್ರಾಣಕೊಟ್ಟು ನನ್ನಲಿ ಕೃಪೆಯತೋರಿದೆ
ಬರೆಗೈಯಾಗಿ ಬಂದ ನನ್ನ ತುಂಬಿದವನು ನೀನಲ್ಲವೇ
ಮನಸಾರೆ ಕೊಂಡಾಡುತ ನಿನ್ನನ್ನೇ ಆರಾಧಿಸುವೆ
ಕಳೆದೋದ ನನ್ನ ಹುಡುಕಲು ಬಂದೆ
ಮುರಿದೋದ ಮನವನ್ನು ಸ್ವಸ್ಥ ಪಡಿಸಿದವನೇ
ಒಂಟಿಯಾದ ನನಗೆ ಬಲವನ್ನು ನೀಡಿದೆ
ಸೋತು ಹೋದ ಸಮಯದಿ ಜಯವನ್ನು ತಂದಿದೆ
- ಕಾಣದೆ ಹೋಗಿದೆ ಇನ್ನುಮುಂದೆ ಜೀವನ
ಈಜಲು ಆಗದು ಈ ಪಯಣ
ನನ್ ಬಾಳು ಬೆಳಗಲು ಬೇಕಯ್ಯಾ ನಿನ್ ಗಮನ
ಈ ಚಿಕ್ಕ ಆಸೆಗೆ ನೀನೆ ಕಾರಣ
ನನ್ನ ಕೈ ಬಿಡನುಎಂದು ಅಂದವನು ನೀನಲ್ಲವೇ
ನನಗಾಗಿ ಇಳಿದುಬಂದು ಎನಗೆ ಪ್ರೀತಿಯೆತೋರಿದೆ
ನನ್ನ ಬಂಡೆ ನನ್ನ ಕೋಟೆ ಯೆಲ್ಲವೂ ನೀನೆತನೇ
ಮನಸಾರೆ ಕೊಂಡಾಡುತಾ ನಿನ್ನನೇ ಆರಾಧಿಸುವೆ
||ಕಳೆದೋದ ನನ್ನ ||
- ಮರಣದ ವೇದಾನೆ ನನ್ನ ಸುತ್ತಿಕೊಳ್ಳಲು
ಮಾರ್ಗವು ತಿಳಿಯದೆ ಒಂಟಿಯಾದೆನ
ಇಕ್ಕಟ್ಟಿನಲ್ಲಿ ನಿನ್ನ ಬೇಡುತಿರುವೆನು
ಈ ನನ್ನ ಮೊರೆಯನು ಒಮ್ಮೆ ಕೇಳಯ್ಯ
ನನ್ನೊಂದಿಗೆ ಇರುವೆನೆಂದು ಹೇಳಿದವನು ನೀನಲ್ಲವೇ
ನನ್ನ ಕಂಡು ಬಲಿಗೆಬಂದು ನನಗೆ ಕರುಣೆಯ ತೋರಿದೆ
ನನ್ನ ಬಲವು ನನ್ನ ಗೆಲುವು ಯೆಲ್ಲವೂ ನೀನೆತನೇ
ಉಳಿದಿರುವ ಈ ಜೀವನ ನಿನ್ನ ಸೇವೆಗೆಅರ್ಪಣೆ
||ಕಳೆದೋದ ನನ್ನ ||
