ಜನಿಸಿಹನಾರು ಗೋದಲಿಯೊಳು – Janisihanaaru godaliyolu

Faith Score+2
Faith Score+2

ಜನಿಸಿಹನಾರು ಗೋದಲಿಯೊಳು – Janisihanaaru godaliyolu

ಪಲ್ಲವಿ
ಜನಿಸಿಹನಾರು ಗೋದಲಿಯೊಳು
ವಿನಯದ ಶಿಶುವಾಗಿ

ಅನುಪಲ್ಲವಿ
ಅನುಪಮಸುಂದರಶಿಶುವಾಗಿಯೇ
ವಿನಯದಿ ಮೆರೆಯುತ ಶಾಂತಿಯ ಬೀರುತ

ಚರಣಗಳು
1. ಕರುಕಟ್ಟಿದ ಕೊಟ್ಟಿಗೆಯೊಳೆಗೆ
ಗುರುರಾಯ ತಾ ಜನಿಸೆ ಬಂದುದು
ಉರುತರ ದೀನತೆ ಧರೆಯೊಳು ಬೀರುತೆ
ಹರುಷವ ಮನದೊಳು ನಿರುತವು ನೀಡುತೆ ಜನಿಸಿಹ –

2. ಆತ ಲೋಕದಿ ಪುಟ್ಟಿದುದೇತಕೆ
ಆತ ತಾನೆಮ್ಮೊಳ್ ಜೀವಿಸಲೋಸುಗ
ಆತನ ಸುಜನರು ಸತತವು ನಡೆಯಲು
ನೀತಿಯ ಮಾರ್ಗದಿ ದರ್ಶಕನಾಗಿ – ಜನಿಸಿಹ –

3. ಚಿನ್ನರನ್ನದಿಂ ಕೂಡಿದ ಭೂಮಿಯಂ
ಬಣ್ಣಿಸ ಸಾಧವ್ಯೆ ಸಾಸಿರ ಸಾರಿ
ಉನ್ನತದೇವನು ಧರೆಯೊಳು ಮಲಗೆ
ಸಣ್ಣನೆ ತೊಟ್ಟಲು ಆತಗೆ ಠಾವೆ – ಜನಿಸಿಹ –

4. ದಿವಿಜಲೋಕದಿ ದೇವಗೆ ಮಹಿಮೆ
ಬುವಿಯ ನರರೊಳು ಸಮಾಧಾನ
ನವಯುಗವಿನ್ನು ಬೆಳಗಲಿಯೆಂದು
ನವಗೀತವನು ದೂತರು ಹಾಡೆ – ಜನಿಸಿಹ –

5. ಧರಣೆಯೊಳಗೆ ಸಾರಿರೀ ವಾರ್ತೆಯ
ವರದ ಸುತಗೆ ನುತಿಯನು ಬೀರಿ
ಕರಗಳ ಜೋಡಿಸಿ ಶಿರವನು ಬಾಗಿಸಿ
ನಿರುತವು ಜೋಗುಳ ಹಾಡನು ಹಾಡಿರಿ – ಜನಿಸಿಹ –

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo