Nin Rakthava Surisi – ನಿನ್ ರಕ್ತವ ಸುರಿಸಿ
ನಿನ್ನ ಬಿಟ್ಟು ನನ್ನನ್ನು ಪ್ರೀತಿಸುವವರು ಯಾರು
ನಿನ್ನ ಬಿಟ್ಟು ನನ್ನನ್ನು ಕಾಯುವವರು ಯಾರು – ೨
ನಿನ್ನ ಹೊರತು ಯಾರು ದೇವರೇ
ನಿನ್ನ ಹೊರತು ಯಾರು ಯೇಸುವೇ -೨
ನಿನ್ನ ರಕ್ತವ ಸುರಿಸಿ ನಿನ್ನ ಪ್ರಾಣವ ಕೊಟ್ಟು
ನನ್ನನ್ನು ಸುರಕ್ಷಿತವಾಗಿ ಇಟ್ಟಿರುವೆ ಅಯ್ಯ -೨
|| ಯೇಸಯ್ಯ ನನ್ನೇಸಯ್ಯ ನನಗಾಗಿ ನಿನ್ನ ಪ್ರಾಣವ ಕೊಟ್ಟಿರುವೆ
ಯೇಸಯ್ಯ ನನ್ನೇಸಯ್ಯ ಎಂದು ನಿನಗಾಗಿ ನಾ ಜೀವಿಸುವೆ || 2
* ಅಪ್ಪಾ ನಿನ್ನ ತ್ಯಾಗವ ನಾ ಮರೆಯಲಾಗದು
ಅಪ್ಪ ನಿನ್ನ ಪ್ರೀತಿಯ ನಾ ವರ್ಣಿಸಲಾಗದು -೨
ಬದಲೇನು ನಾನು ಕೊಡಲಿ ಯೇಸಯ್ಯಾ
ನಿನ್ನ ಪ್ರೀತಿ ಶ್ರೇಷ್ಠವು ಓ ಯೇಸಯ್ಯ – ೨
ನಿನ್ನ ರಕ್ತವ ಸುರಿಸಿ ನಿನ್ನ ಪ್ರಾಣವ ಕೊಟ್ಟು
ನನ್ನನ್ನು ಸುರಕ್ಷಿತವಾಗಿ ಇಟ್ಟಿರುವೆ ಅಯ್ಯ -೨
|| ಯೇಸಯ್ಯ ನನ್ನೇಸಯ್ಯ ನನಗಾಗಿ ನಿನ್ನ ಪ್ರಾಣವ ಕೊಟ್ಟಿರುವೆ
ಯೇಸಯ್ಯ ನನ್ನೇಸಯ್ಯ ಎಂದು ನಿನಗಾಗಿ ನಾ ಜೀವಿಸುವೆ || 2

