ನಿನ್ನ ಬಿಟ್ಟು ನಾನು ಏನು – Ninna Bittu nanu enu song lyrics
ನಿನ್ನ ಬಿಟ್ಟು ನಾನು ಏನು ಮಾಡಲಾರೆನು
ಎಲ್ಲಿಗೆ ಹೋಗಲಾರೆನು ನನ್ನ ಗಮ್ಯವು ನೀನಲ್ಲವೋ ।।2।।
ಚಿಂತೆಗಳು ನನ್ನನ್ನು ಬಾದಿಸಲು ರೋಗದಿಂದ ನಾನು ಅಳುತ್ತಿರಲು
ನನ್ನ ವೈದ್ಯನು ನೀನಲ್ಲವೋ ।। ನಿನ್ನ||
೧) ಸ್ವಂತ ಜನರು ನನ್ನ ತೊರೆದರು ಸ್ನೇಹಿತರೆಲ್ಲಾ ಕೈ ಬಿಟ್ಟರು
ನೀ ನನ್ನ ತೊರೆಯದೆ ನನ್ ಕಯ್ಯ ಹಿಡಿದು ನನ್ನನ್ನು ಸಂತೈಸಿದೆ ।।2।। ನಿನ್ನ ಬಿಟ್ಟು
೨) ಹಿಂಸೆಯಿಂದ ಕುಗ್ಗಿಹೋಗಲು ಕಷ್ಟಗಳಲ್ಲಿ ಬಿದ್ದಿದ್ದರು
ವಾಕ್ಯದಲ್ಲಿ ನಡೆಸಿ ಆತ್ಮದಿಂದ ತುಂಬಿಸಿ ಸೇವೆಯಲ್ಲಿ ನಿಲ್ಲಿಸಿದೆ ।।2।। ನಿನ್ನ ಬಿಟ್ಟು


