ನನ್ನ ಎದೆಯ ಬಡಿತವು ನೀನೇ – Nanna yedeya baditavu neene
ನನ್ನ ಎದೆಯ ಬಡಿತವು ನೀನೇ
Nanna yedeya baditavu neene
ನನ್ನ ಮನಸಿನ ಮಿಡಿತವು ನೀನೆ ನೀನೆ ನೀನೇ ಯೇಸು
Nanna manasina midithavu neene neene neene yesu
ನಿನ್ನ ಒಲವಿಗೆ ಪುಳಕಿತನಾದೆ ನಿನ್ನಲ್ಲೇ ಮುಳುಗಿ ನಾ ಹೋದೆ ಇಂದು ಎಂದು ಎಂದೆಂದೂ
Ninna olavige pulakithanaade Ninnalle mulugi Naa hode
Indu endu yendendu
ಹಾಲ್ಲೆಲೂಯ ನಿನ್ನನ್ನಾರಾಧಿಸುವೆ [4]
Hallelujah ninnannaaradhisuve-(4)
*ನಾನು ಶರಣಾಗತನು ನಿನಗೆ ನನ್ನನ್ನು ಕಾಪಾಡು
Naanu sharanaagathanu ninage nannannu kaapadu
ನೀನೇ ನನ್ನ ಒಡೆಯನು ನನ್ನ ಆಳ್ವಿಕೆ ಮಾಡು
Neene nanna odeyanu nanna aalvike maadu
ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲವೇ
Nanna sukhavu ninnalliye horathu bere illavae
ನನ್ನ ತನು ಮನ ಕ್ಷಯಿಸಿದರು ಶರಣನು ನೀನಲ್ಲವೇ
||ನನ್ನ||
Nanna Thanu mana kshayisidaru nanna sharananu neenallavae.- Nanna –
*ನನಗೆ ಪ್ರಾಪ್ತವಾದ ಸ್ವಾಸ್ಥ್ಯ ನೀನೇ ಅಲ್ಲವೇ
Nanage praapthavaadha swaasthya neene allave
ನನ್ನ ಪಾಲು ಪಾನವು ನೀನೇ ಅಲ್ಲವೇ
Nanna paalu paanavu neene allavae
ನಿನ್ನನ್ನೇ ಯಾವಾಗಲೂ ನಾನು ಎದುರಿಗೆ ಇಟ್ಟಿರುವೆ
Ninnanne yaavagalu naanu yedurige ittiruve
ನೀನು ಬಲಗಡೆ ಇರುವುದರಿಂದ ನಾನೆಂದು ಕದಲಲಾರೆ. ||ನನ್ನ||
Neenu balagade iruvudarinda Naanendu kadalalaare Nanna
* ನನಗೆ ಆಲೋಚನೆಯನ್ನು ನೀನೇ ಹೇಳುವೆ
Nanage aalochaneyannu neene heluve
ರಾತ್ರಿಯ ವೇಳೆಯಲ್ಲೂ ನಿನ್ನನ್ನೇ ಕೊಂಡಾಡುವೆ
Rathriya veleyallu ninnanne kondaduvae
ಜೀವಮಾರ್ಗವನ್ನು ನನಗೆ ತಿಳಿಯಪಡಿಸುವೆ
Jeeva maargavannu nanage thiliyapadisuve ಶಾಶ್ವತ ಭಾಗ್ಯವೂ ನೀನೇ ಅಲ್ಲವೇ
||ನನ್ನ||
shaashvatha bhaagyavu neene allavave Nanna
