ಆಕಾಶ ಭೂಮಿಯನ್ನು ಸೃಷ್ಟಿಸಿದ ದೇವ – Akasha Bhomiyanu
ಆಕಾಶ ಭೂಮಿಯನ್ನು ಸೃಷ್ಟಿಸಿದ ದೇವನೇ ಶರಣಾಗಿ ನಿನಗೆ ನಮೋನಮಿಸುವೆ ಸೂರ್ಯಚಂದ್ರ ತಾರೆಗಳ ಬೆಟ್ಟ ಗುಡ್ಡ ಸಾಗರವ ಸರ್ವವನ್ನು ರೂಪಿಸಿದ ದೇವನು ನೀನೆ ದೇವನು ನೀನೆ
1.ತರತರದ ಸಸ್ಯಗಳ ವಿಧವಿಧದ ಪ್ರಾಣಿಗಳ ಸಕಲ ಜೀವ ಜಂತುಗಳ ಸೃಷ್ಟಿ ಮಾಡಿದೆ ನಿನ್ನ ಸ್ವಂತ ರೂಪದಲ್ಲಿ ಮನುಷ್ಯನನ್ನು ರೂಪಿಸಿ ಆತನಿಗೆ ನಿನ್ನ ಉಸಿರ ದಾನ ಮಾಡಿದೆ
2.ಒಳಿತು ಕೆಡುಕು ಅರಿವುಗಳ ಜ್ಞಾನ ನೀಡೋ ವೃಕ್ಷಗಳ ಏದೆನ್ ತೋಟದಲ್ಲಿ ನೀನು ಬೆಳೆಯ ಮಾಡಿದೆ ಒಂಟಿ ಜೀವಿ ಆದಾಮನಿಗೆ (ಮನುಷ್ಯನಿಗೆ) ಸರಿಸಮಾನ ಜೊತೆಗಾತಿ ಏವಳನ್ನು ಅಂದೇ ನೀನು ಸೃಷ್ಟಿ ಮಾಡಿದೆ


