ಏನನ್ನು ಕಂಡು ನನ್ನನ್ನು ಪ್ರೀತಿಸಿದೆ – Enanu Kandu Kannada Christian Song Lyrics
ಏನನ್ನು ಕಂಡು ನನ್ನನ್ನು ಪ್ರೀತಿಸಿದೆ
ನೀನ್ ಜೀವವನ್ನೆ ನನಗೆ ಕೊಟ್ಟೆ
ಏನನ್ನು ಕಂಡು ನನ್ನನ್ನು ಆರಿಸಿ..ಕೊಂಡೆ
ನಿನ್ನ ಸೇವೆಗೆಂದು ನನ್ನನ್ನು ಕರೆದೆ (2)
ನಿನ್ನ ಕೃಪೆಯ ಕಂಗಳಿಗೆ ನಾ…ನು
ಉತ್ತಮನಾಗಿ ಕಂಡೆ ಏ…ನು
ನಿನ್ನ ಹೃದಯದ ಬಾಂಧವ್ಯಕ್ಕೆ ನಾ…ನು
ಸರಿಹೊಂದುವೆ ಎಂದು ಎಣಿಸಿದೆ ಏ….ನೋ
ಎಲ್ಲವು ನಿನ್ನಯ ಕೃಪೆ ಅಲ್ಲವೆ
ಎಲ್ಲವು ನಿನ್ನಯ ಕೃಪೆ ಅಲ್ಲವೆ
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2)
ಅಂಧಕಾರ ದೊರೆತನದಿಂದ
ಅಗಮ್ಯವಾದ ಬೆಳಕಿನ ಕಡೆಗೆ
ಪ್ರಾಣ ಕೊಟ್ಟು ಎಳೆದದ್ದು ನಿನ್ ಕೃಪೆಯೆ
ಉಪಯೋಗಕೆ ಬಾರದ ನನ್ನ
ನಿನ್ ಮಹಿಮೆ ಹೊರುವಂತೆ
ಶಿಲ್ಪಿಯಂತೆ ರೂಪಿಸಿದ್ದು ನಿನ್ ಕೃಪೆಯೆ
ನಿನ್ನ ಕೃಪೆಯು ನನ್ನ ಕೈ ಹಿಡಿ…ದು ನಡೆಸಿ
ಉನ್ನತಗಳಲ್ಲಿ ಕೂರೀ…ಸಿತು
ನಿನ್ನ ದಯೆಯು ನನ್ನ ಪ್ರತಿ ನ್ಯೂನತೆಯ ಮುಚ್ಚಿ
ಅಲಂಕರೀ…ಸಿ ಮೇಲೆತ್ತಿತು
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2)
ನನಗಾಗಿ ನೀ ಮಾಡಿದ ಮೇಲುಗಳ ನೆನೆಸುವಾಗ
ನಾನು ನನ್ನ ಕುಟುಂಬವು ಎಷ್ಟರವರು
ವಂಶವನ್ನೆ ಅಳಿಸಲು ಬಂದ ದೈತ್ಯರನ್ನು ಇಲ್ಲದಾಗಿಸಿ
ಹೆಗಲ ಮೇಲೆ ಹೊತ್ತು ಮೆರೆಸಿದ್ದು ನಿನ್ ಕೃಪೆಯೇ
ಇಂದು ಏನಾಗಿರುವೇನೋ ಅದೆಲ್ಲ…ವು ನಿನ್ ಕೃಪೆಯೆ
ನಿನ್ನ ಕೃಪೆ ಇಲ್ಲದೆ ನಾ ಬಾಳೆನು
ನನ್ನಲ್ಲಿರುವುದೆಲ್ಲನಿನ್ನ ಕೃಪೆಯ ದಾನ
ನಿನಗಾ..ಗಿಯೇ ನಾ ಅಳುವೆನು
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2)
ಎಲ್ಲವು ನಿನ್ನಯ ಕೃಪೆ ಅಲ್ಲವೆ (2)
Enanu Kandu Lyrics in English
ಏನನ್ನು ಕಂಡು ನನ್ನನ್ನು ಪ್ರೀತಿಸಿದೆ Lyrics, Enanu Kandu Song Lyrics
Published by World Kannada Christians – Kannada Christian Songs, News, Bible Verses & Devotionals.
Key Takeaways
- ಈ ಕ್ಯಾಸ್ಸರ್ ‘ಏನನ್ನು ಕಂಡು ನನನು ಪ್ರೀತಿಸಿದೆ’ ಎಂಬ ಕೂಟವು ಕಂತು Kannada ಕ್ರಿಶ್ಚಿಯನ್ ಹಾಡಿನ ರೂವಾರಿ ಮತ್ತು ಅಭಿವ್ಯಕ್ತಿ.
- ಈ ಹಾಡಿನಲ್ಲಿ ಎಂದಾದರೂ ದೇವರ ಕೃಪೆ ಮತ್ತು ಸವಾಲುಗಳನ್ನು ಮರೆಯಿಲ್ಲ.
- ಹಾಡಿನಲ್ಲಿ ಸ್ವರಶ್ರುತಿ ಮತ್ತು ಉಲ್ಲಾಸವನ್ನು ಪಡೆದಿದೆ.
- ಕಂಪನಿಯು ಕರ್ನಾಟಕ ಕ್ರಿಶ್ಚಿಯನ್ ಹಾಡುಗಳು, ಸುದ್ದಿಗಳು, ಬೈಬಲ್ ಶ್ಲೋಕಗಳು ಮತ್ತು ಧ್ಯಾನಗಳನ್ನು ಅರಿತುಕೊಳ್ಳಲು ಅನುಕೂಲವಾಗಿದೆ.
- ಹಾಡಿಗೆ ಸಂಬಂಧಿಸಿದ ಇನ್ನಷ್ಟು ಲಕ್ಷಣಗಳು ಮತ್ತು ಲಿಂಕ್ಸ್ ನಿಮ್ಮನ್ನು ಇತರ ಕನ್ನಡ ಕ್ರಿಶ್ಚಿಯನ್ ಗೀತೆಗಳಿಗೆ ಕೊಂಡೊಯ್ಯುತ್ತವೆ.
Estimated reading time: 2 minutes
