Prathiyondu Samayadi Lyrics – ಪ್ರತಿಯೊಂದು ಸಮಯದಿ

Faith Score0
Faith Score0

Prathiyondu Samayadi Kannada Christian Song Lyrics, Written and Sung by Shalem Raj – ಪ್ರತಿಯೊಂದು ಸಮಯದಿ

ನನ್ನ ಪ್ರತಿಯೊಂದು ಸಮಯದಿ ನಿನ್ನನ್ನೇ ಪ್ರಾರ್ಥಿಸುವೆ
ಎಲ್ಲೇ ನಾ ಇದ್ದರೂ ನಿನ್ನ ನೆನಪಲ್ಲೇ ಇರುವೆ
ಶೋಧನೆಗಳೇ ಎದುರಾದರೂ ನಿನ್ನನ್ನೇ
ಸ್ತುತಿಸುವೆ ನನ್ ದೇವ ಯೇಸಯ್ಯ, ನನಗಾಗಿ ನೀ ಇರುವೆ

ಬೇಟೆಗಾರನ ಬಲೆಯಿಂದ ನನ್ನನ್ನು ಬಿಡಿಸಿರುವೆ
ನಿನ್ನ ರೆಕ್ಕೆಯ ಕೆಳಗೆ ಆಶ್ರಯವು ನನಗೆ ನೀಡಿರುವೆ
ಯಾವ ಕೇಡು ಬಳಿಗೆ ಬಾರದು ನನ್ನನ್ನು ಕಾದಿರುವೆ
ನೀನೇ ನನಗೆ ಆಧಾರವು, ನಾ ಪ್ರೀತಿಯ ಯೇಸುವೇ
ಆರಾಧನೆ || ೪ ||

1) ಶೋಧನೆಗಳೇ ಬಂದರೂ
ಕಷ್ಟಗಳೇ ಎದುರಾದರೂ
ನನ್ನ ಬಳಿ ಸೇರಿ ಆಧಾರಣೆ ತೋರಿ ನನ್ನನ್ನು ನಡೆಸಿರುವೆ

ನನ್ನವರೇ ನನ್ನ ಮರೆತರು
ಆತ್ಮೀಯರೇ ನನ್ನ ತೊರೆದರು
ಎಂದಿಗೂ ನನ್ನ ಕೈ ಬಿಡನೆಂದು ಜೊತೆಯಲ್ಲಿ ನಿಂತಿರುವೆ

ನನಗಾಗಿಯೇ ಆ ತ್ಯಾಗವಾ?
ಶಿಲುಬೆಯಲ್ಲಿ ಬಲಿಯಾಗವಾ?
ನಿಸ್ವಾರ್ಥವೇ ನಿನ್ನ ಪ್ರೀತಿಯು
ಕೊನೆಯಾಗದು ನಿನ್ನ ಕೃಪೆಯು

ಬೇಟೆಗಾರನ ಬಲೆಯಿಂದ ನನ್ನನ್ನು ಬಿಡಿಸಿರುವೆ
ನಿನ್ನ ರೆಕ್ಕೆಯ ಕೆಳಗೆ ಆಶ್ರಯವು ನನಗೆ ನೀಡಿರುವೆ
ಯಾವ ಕೇಡು ಬಳಿಗೆ ಬಾರದು ನನ್ನನ್ನು ಕಾದಿರುವೆ
ನೀನೇ ನನಗೆ ಆಧಾರವು, ನಾ ಪ್ರೀತಿಯ ಯೇಸುವೇ
ಆರಾಧನೆ || ೪ ||

2) ಪಾಪಿಯಾದ ನನ್ನ ನೆನಸಿ
ಪ್ರತಿ ಅಪಾಯದಿಂದ ತಪ್ಪಿಸಿ
ಅಂಧಕಾರ ಲೋಕದಿಂದ ನನ್ನನ್ನು ರಕ್ಷಿಸಿದೆ

ಅಧಿಕವಾಗಿ ಬಲಪಡಿಸಿ
ನಿನ್ನ ಸೇವೆಗಾಗಿ ಉಪಯೋಗಿಸಿ
ಅಮೂಲ್ಯವಾದ ಪಾತ್ರೆಯಾಗಿ ನನ್ನನ್ನು ರೂಪಿಸಿದೆ

ನಿನ್ನ ಪ್ರೀತಿಯೇ ನಾ ಸಾರುವೆ
ನಿನಗಾಗಿಯೇ ನಾ ಬಾಳುವೆ
ನಿನ್ನ ಸೇವೆಯ ನಾ ಮಾಡುವೆ
ಸಮಸ್ತವನ್ನೇ ಅರ್ಪಿಸುವೆ

ಬೇಟೆಗಾರನ ಬಲೆಯಿಂದ ನನ್ನನ್ನು ಬಿಡಿಸಿರುವೆ
ನಿನ್ನ ರೆಕ್ಕೆಯ ಕೆಳಗೆ ಆಶ್ರಯವು ನನಗೆ ನೀಡಿರುವೆ
ಯಾವ ಕೇಡು ಬಳಿಗೆ ಬಾರದು ನನ್ನನ್ನು ಕಾದಿರುವೆ
ನೀನೇ ನನಗೆ ಆಧಾರವು, ನಾ ಪ್ರೀತಿಯ ಯೇಸುವೇ
ಆರಾಧನೆ || ೪ ||

Prathiyondu Samayadi Lyrics in English

Prathiyondu Samayadi Song Lyrics, ಪ್ರತಿಯೊಂದು ಸಮಯದಿ Lyrics

Key Takeaways

  • The article features the Kannada Christian song ‘Prathiyondu Samayadi’, written and sung by Shalem Raj.
  • The lyrics express deep devotion and reliance on Jesus in times of struggle and uncertainty.
  • Key themes include seeking refuge in faith and the enduring nature of divine love and support.
  • Additional links provide access to more Kannada Christian songs and worship lyrics.
  • Overall, the song emphasizes unwavering faith and the importance of prayer and worship.

Estimated reading time: 2 minutes

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo