Kanasallu Oohisalilla Kannada Christian Song Lyrics, Written and Sung by Dr.Kotresh & Shilpa – ಕನಸಲ್ಲೂ ಊಹಿಸಲಿಲ್ಲ
ಕನಸ್ಸಲ್ಲೂ ಊಯಿಸಲಿಲ್ಲ ಮನಸ್ಸಲ್ಲೂ ಯೋಚಿಸಲಿಲ್ಲ ||೨||
ನೀ ನನ್ನನ್ನೂ ಕೈಹಿಡಿಯುವೆ ಎಂದೂ
ನೀ ನನ್ನನ್ನೂ ಮೇಲೆತ್ತುವೆ ಎಂದೂ ||೨||
ಇದು ನನ್ನ ಪುಣ್ಯ ಅಲ್ಲ ಇದು ನನ್ನ ಭಾಗ್ಯವಲ್ಲಾ
ಕೇವಲ ನಿನ್ನ ಕೃಪೆಯೇ || ||ಕನಸ್ಸಲ್ಲೂ ಊಯಿಸಲಿಲ್ಲ||
೧. ನಾ ಕಳೆದು ಕೊಂಡಿದ್ದೆಲ್ಲಾ ಮರಳಿ ಪಡೆಯುವಂತೆ ಮಾಡಿ
ನನ್ನನ್ನು ಉದ್ಧರಿಸಿದೆ
ನನಗೆ ಬಂದ ಶ್ರಮೆಗಳೆಲ್ಲಾ ಮಂಜಿನಂತೆ ಕರಗಿಹೋಗಲು
ನೀನು ಕೃಪೆ ತೋರಿದೆ ||೨||
ಇದು ನನ್ನ ಪುಣ್ಯ ಅಲ್ಲ ಇದು ನನ್ನ ಭಾಗ್ಯವಲ್ಲಾ
ಕೇವಲ ನಿನ್ನ ಕೃಪೆಯೇ || ||ಕನಸ್ಸಲ್ಲೂ ಊಯಿಸಲಿಲ್ಲ||
೨. ಬಿದ್ದು ಹೋದ ಗೋಡೆಯಂತಿದ್ದ ನನ್ನ ಬದುಕನ್ನು
ರಾಜ ಗೃಹ ಮಾಡಿದೆ
ಸೆರೆಯಲ್ಲಿ ಇದ್ದ ನನಗೆ ನಿನ್ನ ಕರುಣೆ ತೋರಿಸಿ
ಅರಮನೆಗೆ ಮೇಲೆತ್ತಿದೆ ||೨||
ಇದು ನನ್ನ ಪುಣ್ಯ ಅಲ್ಲ ಇದು ನನ್ನ ಭಾಗ್ಯವಲ್ಲಾ
ಕೇವಲ ನಿನ್ನ ಕೃಪೆಯೇ || ||ಕನಸ್ಸಲ್ಲೂ ಊಯಿಸಲಿಲ್ಲ||
೩. ವರ್ಣಿಸಲು ಪದಗಳೇ ಇಲ್ಲ ಬಣ್ಣಿಸಲು ಮಾತೇ ಇಲ್ಲ
ನೀ ತೋರಿದ ಪ್ರೀತಿಗೆ
ನಾ ಮೂಕ ವಿಸ್ಮಿತನಾದೆ, ಆಶ್ಚರ್ಯ ಚಕಿತನಾದೆ
ನನ್ನ ಮೇಲಿಟ್ಟ ಪ್ರೀತಿಗೆ ||೨||
ಇದು ನನ್ನ ಪುಣ್ಯ ಅಲ್ಲ ಇದು ನನ್ನ ಭಾಗ್ಯವಲ್ಲಾ
ಕೇವಲ ನಿನ್ನ ಕೃಪೆಯೇ ||೨||
ಕೇವಲ ನಿನ್ನ ಕೃಪೆಯೇ
Kanasallu Oohisalilla Lyrics in English
Kanasallu Oohisalilla Song Lyrics, ಕನಸಲ್ಲೂ ಊಹಿಸಲಿಲ್ಲ Lyrics
Published by World Kannada Christians – Kannada Christian Songs, News, Bible Verses & Devotionals.
Key Takeaways
- The article presents the lyrics of the Kannada Christian song ‘Kanasallu Oohisalilla’ written and sung by Dr. Kotresh and Shilpa.
- The lyrics express themes of divine grace, redemption, and gratitude.
- Specific lines emphasize reliance on God’s mercy rather than personal merit or luck.
- The article also notes that the song is published by World Kannada Christians, alongside related content.
Estimated reading time: 2 minutes

