Sthutisuve Ninna Upakara Kannada Christian Worship Song Lyrics, Written and Sung by Chandru Naik & Deepa – ಸ್ತುತಿಸುವೆ ನಿನ್ನ ಉಪಕಾರ ನೆನೆಸಿ
ಸ್ತುತಿಸುವೇ ನಿನ್ನ ಉಪಕಾರ ನೆನೆಸಿ ಪೂರ್ಣ ಹೃದಯದಿಂದ
ಪ್ರೀತಿಸುವೆ ಅಪ್ಪ ನಿನ್ನ ಕೃಪೆಯ ನೆನೆಸಿ ಸಂಪೂರ್ಣ ಮನಸ್ಸಿನಿಂದ”2″
“ಸ್ತುತಿಸುವೇ ಸ್ತುತಿಸುವೇ ಜೀವ ಇರೋವರೆಗೂ
ಉಸಿರು ಇರೋವರೆಗೂ
ನನ್ನ ಪ್ರಾಣ ಇರೋವರೆಗೂ” “ಸ್ತುತಿಸುವೇ”
1.”ನಾನು ಎಂಬ ಅಹಂಕಾರ ಮರೆತು…..
ಸ್ವಾರ್ಥವ ತೊರೆದು ನಿನ್ನ ಬಳಿಗೆ ಬಂದಿರುವೆ”2″
“ಪಾಪದ ಹೃದಯ ನನ್ನಿಂದ ತೊರೆದು
ನಿನ್ನ ಬಳಿಗೆ ಬಂದಿರುವೆ
ನಂಬಿಕೆ ಇಟ್ಟು ನಿಸ್ವಾರ್ಥ ಮನಸ್ಸಿನಿಂದ ನಿನ್ನ ಸನ್ನಿಧಿಗೆ ಬಂದಿರುವೆ”
“ನಿನ್ನ ಆತ್ಮದಿ ನನ್ನನ್ನು ನಡೆಸು ಹೃದಯದಿಂದ ಆರಾಧಿಸಲು”2″ ಸ್ತುತಿಸುವೇ”
2.”ನಿನ್ನ ಸನ್ನಿಧಿಗೆ ನಾ ಬಂದಿರುವೆ ಯೇಸಯ್ಯ
ಸ್ತುತಿ ಸ್ತೋತ್ರ ಯಜ್ಞಗಳ ತಂದಿರುವೆ ಯೇಸಯ್ಯ”2″
“ನಾನು ನಂಬಿದ ದೇವರು ನೀನೆ ನನ್ನ ಭರವಸೆಗೆ ಆಧಾರ ನೀನೇ
ಯಾವ ಕೇಡು ಬಳಿ ಬಾರದಂತೆ ನಿನ್ನ ಹಸ್ತದಿ ಮರೆ ಮಾಡಿರುವೆ”
“ನೀ ಮಾಡಿದ ಸಹಾಯವ ನೆನೆಸಿ ನೆನೆಸಿ ಹೃದಯದಿಂದ ಆರಾಧಿಸುವೆ”2″ ಸ್ತುತಿಸುವೇ”
3.”ಗತಿಯೇ ಇಲ್ಲದ ನನ್ನನ್ನು ಗಮನಿಸಿದೆ….
ಕರುಣಿಸಿ ನನ್ನ ಸ್ಥಿತಿಗಳನ್ನು ಬದಲಿಸಿದೆ”2″
“ಯಾವ ಅರ್ಹತೆಯು ಇಲ್ಲದ ನನಗೆ
ನಿನ್ನ ಕಣ್ಣು ನನ್ನ ದೃಷ್ಟಿಸಿದವು
ಯಾರ ಗಣನೆಗೂ ಬಾರದ ನನ್ನ ಘನತೆ ಗೌರವ ತಂದಿರುವೆ”
“ಸಾರ್ಥಕವಾಯಿತು ಈ ನನ್ನ ಜನುಮ ನಿನ್ನ ನಂಬಿದ ದಿನದಿಂದಲೇ”2” “ಸ್ತುತಿಸುವೇ”
- Pastor L. Hemanth Kumar
Sthutisuve Ninna Upakara Lyrics In English
Sthutisuve Ninna Upakara Song Lyrics, ಸ್ತುತಿಸುವೆ ನಿನ್ನ ಉಪಕಾರ ನೆನೆಸಿ Lyrics
Key Takeaways
- The article features the lyrics of the Kannada Christian worship song ‘Sthutisuve Ninna Upakara’.
- Chandru Naik and Deepa sing this song, expressing gratitude and devotion to God.
- The lyrics reflect themes of humility, reliance on God’s grace, and heartfelt worship.
- Pastor L. Hemanth Kumar is mentioned in connection with the song.
- The article also includes a request for the English translation of the lyrics.
Estimated reading time: 2 minutes

