Anya Janareke Songs of Zion Kannada Christian Lyrics – ಅನ್ಯ ಜನರೇಕೆ ಎದ್ದು
ಪಲ್ಲವಿ: ಅನ್ಯ ಜನರೇಕೆ ಎದ್ದು ದೊಂಬಿ ಮಾಡುತ್ತಿರುವರು – ಅನ್ಯ ಜನರೇಕೆ?
ಅ||ಪ||: ಜನಾಂಗಗಳು ವ್ಯರ್ಥಕಾರ್ಯಗಳ್ ಯೋಚಿಸುತ್ತಿರುವುದೇಕೆ?
1. ಭೂರಾಜರೆಲ್ಲರೂ ಒಟ್ಟಾಗಿ – ಸೇರಿ ಆಲೋಚಿಸುತ್ತಿರುವರು
ಅವರ ಬಂಧನಗಳನ್ನು ಕಿತ್ತು – ಮುರಿದು ಬಿಸಾಡೋಣವೆಂದು
2. ಪರಲೋಕದಾಸೀನನು – ಅವರ ಪರಿಹಾಸ್ಯ ಮಾಡುತ್ತಾ ನಗುವನು
ಕರ್ತನು ಕೋಪಾವೇಶದಿಂದ – ಅವರ ಕಳವಳಗೊಳಿಸುವನು
3. ಪರಿಶುದ್ಧವಾದಂಥ ನನ್ನ – ಚಿಯೋನು ಪರ್ವತದಲ್ಲಿಯೇ
ನಾನು ನೇಮಿಸಿದ ಅರಸನನ್ನು – ಸ್ಥಾಪಿಸಿದ್ದೇನೆಂದು ತಿಳಿಸಿದ
4. ನಾನು ಯೆಹೋವನ – ಆಜ್ಞೆಯ ತಿಳಿಸುತ್ತೇನೆ ಕೇಳಿರೆಂದು
ನನಗೆ ನೀನು ಮಗನು ನಾನೇ – ಈ ಹೊತ್ತು ನಿನ್ನನ್ನು ಪಡೆದಿದ್ದೇನೆ
5. ನನ್ನ ಕೇಳಿಕೊಂಡರೆ ನಿನಗೆ – ಅನ್ಯ ಜನಗಳ ಅಧೀನ ಮಾಡುವೆ
ದಿಗಂತಗಳವರೆಗಿರುವ ದೇಶಗಳ್ – ಸ್ವಾಸ್ಥ್ಯವಾಗಿ ನಿನಗೆ ಕೊಡುವೆನು
6. ಕಬ್ಬಿಣ ಗದೆಯಿಂದ ಅವರನ್ನು – ನಾಶ ಮಾಡಿ ಬಿಡುವಿ ನೀನು
ಮಣ್ಣಿನ ಮಡಿಕೆಗಳಂತೆ ಅವರನ್ನು – ಒಡೆದು ಹಾಕುವಿ ನೀನು
7. ರಾಜರೆಲ್ಲರೇ – ನೀವು – ವಿವೇಕಿಗಳು ಜ್ಞಾನಿಗಳಾಗಿರ್ರಿ
ಭೂಪತಿಗಳೇ ಕಿವಿಗೊಡಿರಿ ನೀವು – ಬುದ್ಧಿ ಮಾತುಗಳಿಗೆ ಇಂದೇ
Anya Janareke Lyrics in English
Anya Janareke Song Lyrics, ಅನ್ಯ ಜನರೇಕೆ ಎದ್ದು Lyrics
Published by World Kannada Christians – Kannada Christian Songs, News, Bible Verses & Devotionals.
Key Takeaways
- Anya Janareke is a Kannada Christian song with powerful lyrics addressing themes of unity and divinity.
- The song questions why nations engage in futile actions and emphasizes the importance of collective thought.
- It mentions God’s authority and the hope for liberation from bondage.
- The lyrics encourage wisdom and understanding among rulers and emphasize listening to wise counsel.
- The song is published by World Kannada Christians and includes both Kannada and English lyrics.
Estimated reading time: 2 minutes

