Aradhisuve ninna – Kannada Christian Songs Mahimeya Arasanu

Faith Score+2
Faith Score+2

Aradhisuve ninna – Kannada Christian Songs Mahimeya Arasanu

ಕರಗಳನ್ನೆತ್ತಿ ಪೂರ್ಣ ಹೃದಯದಿಂದ  ನಿತ್ಯವೂ  ಆರಾಧಿಸುವೆ
ಮೊಣಕಾಲೂರಿ ನಿನ್ನ ಶ್ರೇಷ್ಠ ನಾಮವ  ಎಂದೆಂದಿಗೂ
ಆರಾಧಿಸುವೇ /2/
ಆರಾಧಿಸುವೆ ನಿನ್ನ ಆರಾಧಿಸುವೇ ನಿನ್ನ
ಆರಾಧಿಸುವೆ ನಿನ್ನ ಯೇಸುವೆ,
ಸ್ತುತಿಗೆ ಯೋಗ್ಯನು ನೀನೇ ಮಹಿಮೆಗೆ ಪಾತ್ರನು ನೀನೇ
ನನ್ನಯ ಕರ್ತನೆ ಯೇಸುವೇ. //ಕರಗಳ//

1. ಪಾಪವಿಲ್ಲದ ನೀನು  ಪಾಪದಿಂದ ನನ್ನ ಬಿಡಿಸಲು
ದಂಡನೆಯ ಹೊತ್ತುಕೊಂಡೇ, ಮಗನಾಗಿ ಮಾಡಿಕೊಂಡೆ.//2//
ನಿನ್ ಪ್ರತಿರಕ್ತ ಕಣದಲ್ಲೂ ನನ್ ರೂಪ ಇರಿಸಿರುವೆ
ನಿನ್ ಜೀವದಲ್ಲೇ ನನ್ನ ಹುದುಗಿಸಿದೆ. //2//

2. ಕಣ್ಣೀರ ಸಮಯದಲ್ಲಿ ಕಣ್ಣೀರ ಒರೆಸಿರುವೆ
ಯಾರು ಇಲ್ಲ ಅನ್ನಿಸುವಾಗ   ಕದಲದೇ ಜೊತೆಗಿರುವೆ.//2//
ಸೋತು ಹೋದ ಸಮಯವೆಲ್ಲ ನನ್ನನ್ನು ಬಲಪಡಿಸಿ ಕರಹಿಡಿದು ಕಣ್ಮಣಿಯಂತೆ ಕಾದಿರುವೆ. //2//

3. ಬರಿದಾದ ಈ ಬಾಳನ್ನು ಕೃಪೆಗಳಿಂದ ಶೃಂಗರಿಸಿರುವೆ
ನಕ್ಕವರ ಮುಂದೆಯೇ ಘನವಾಗಿ ಇಟ್ಟಿರುವೆ//2//
ಮಣ್ಣಾದ ನನ್ನನ್ನು  ಬಂಗಾರ ಮಾಡಿರುವೆ
ನಿನ್ನಂತೆ ಪ್ರೀತಿಸಲು ಯಾರು ಇಲ್ಲ.//2//

Aradhisuve ninna by Simon Moses Kannada Christian Songs lyrics Mahimeya Arasanu

 

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo